ನೆರೆ ಪೀಡಿತ ಹಾನಿ ಸಮೀಕ್ಷೆಯ ಪಿಡಿಓಗಳಿಗೆ ಜೀವ ಬೆದರಿಕೆ, ತಾಪಂ ಸಿಇಓ ರಕ್ಷಣೆಯ ಕ್ರಮ ಜರುಗಿಸುವ ಭರವಸೆ

ಒಟ್ಟು ವೀಕ್ಷಣೆಗಳು : 32
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಮೂಡಲಗಿ : ಘಟಪ್ರಭಾ ನದಿಯ ಪ್ರವಾಹದಿಂದ ಹಾನಿಗೀಡಾದ ಮೂಡಲಗಿ ಮತ್ತು ಗೋಕಾಕ ತಾಲೂಕಿನ 16 ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ವಸತಿ ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಇವರ ಕರ್ತವ್ಯಕ್ಕೆ ಕೇಲವೊಂದು ಸಾರ್ವಜನಿಕರು ಸಮೀಕ್ಷೆಯಲ್ಲಿ ತಮ್ಮ ಮನೆಗಳಿಗೆ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ದಾಖಲು ಮಾಡಲು ಒತ್ತಾಯಿಸುತ್ತಿದ್ದು ತಮ್ಮ ಅನತಿ ಪ್ರಕಾರ ನಡೆಯದ ಪಿಡಿಓಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಜೀವ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ತಮ್ಮ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದ್ದು ತಮಗೆ ರಕ್ಷಣೆ ಒದಗಿಸಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಪಿಡಿಓಗಳು ಗುರುವಾರದಂದು ಮೂಡಲಗಿ ಮತ್ತು ಗೋಕಾಕ ತಹಶೀಲ್ದಾರರಿಗೆ ಮತ್ತು ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಕೊಟ್ಟಿರುತ್ತಾರೆ. ಮನವಿ ಪತ್ರದಲ್ಲಿ ಮೂಡಲಗಿ ಮತ್ತು ಗೋಕಾಕ ತಹಶೀಲ್ದಾರರು ದಿನಾಂಕ 12-08-2019ರಂತೆ ರಚನೆಯಾದ ಜಂಟಿ ಸಮೀಕ್ಷೆಯ ಸದಸ್ಯರಾದ ನೋಡಲ ಅಧಿಕಾರಿಗಳು, ತಾಂತ್ರಿಕ ಅಭಿಯಂತರರು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನೂಳಗೊಂಡ ತಂಡ ರಚಸಲಾಗಿದೆ. ಆದರೆ ಸಮೀಕ್ಷೆ ತಂಡದ ಮುಖ್ಯಸ್ಥರಾದ ಕೇಲವು ನೋಡಲ ಅಧಿಕಾರಿಗಳು ಸಮೀಕ್ಷೆ ಪ್ರಾರಂಭದಿಂದ ಮುಕ್ತಾಯದವರೆಗೆ ಒಮ್ಮೆಯೂ ಭಾಗವಹಿಸಿಲ್ಲಾ. ಸ್ಥಳೀಯವಾಗಿ ಉದ್ಬವಿಸಿದ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಎಲ್ಲ ಸಮಸ್ಯೆಗಳಿಗೆ ಪಿಡಿಓಗಳನ್ನು ಹೋಣೆಗಾರರನ್ನಾಗಿ ಮಾಡುತ್ತಿದ್ದಾರೆ. ಅದೇ ರೀತಿ ಕೇಲವು ತಾಂತ್ರಿಕ ಅಭಿಯಂತರರು ಮನೆಗಳ ಸಮೀಕ್ಷೆ ನಂತರ ಮುಂದಿನ ಯಾವುದೇ ಕಾರ್ಯದಲ್ಲಿ ಪಾಲ್ಗೊಳ್ಳದೆ ಸಮಸ್ಯೆಗಳ ಬಗ್ಗೆ ಪಿಡಿಓಗಳ ಮೇಲೆ ತಪ್ಪು ಹೋರೆಸುತ್ತಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳು ನೆಪ ಮಾತ್ರಕ್ಕೆ ಭಾಗವಹಿಸಿ ರಿ.ಸಂ ನಂಬರದಲ್ಲಿರುವ ಮನೆಗಳ ಪ್ರಕರಣಗಳನ್ನು ಸರಿಯಾಗಿ ಪರಿಶೀಲಸದೆ ಪಿಡಿಓಗಳನ್ನು ಕೇಳುವಂತೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಕಾರಣಗಳಿಂದಾಗಿ ಸಾರ್ವಜನಿಕರು ಪಿಡಿಓಗಳ ಕರ್ತವ್ಯಕ್ಕೆ ತೊಂದರೆ ಕೋಡುತ್ತ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ತಹಶೀಲ್ದಾರರು ಸೂಕ್ತ ಕ್ರಮ ತೆಗೆದುಕೊಂಡು ಸಮೀಕ್ಷೆಯ ಕರ್ತವ್ಯಕ್ಕೆ ಅಡ್ಡಿಪಡಿಸದಂತೆ ರಕ್ಷಣೆ ಒದಗಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.

ತಹಶೀಲ್ದಾರರ ಬೇಜವ್ದಾರಿ : .ಈ ಮನವಿ ಕೊಡುವದಕ್ಕಿಂತ ಮುಂಚೆ ಅನೇಕ ಸಾರಿ ಸಾರ್ವಜನಿಕರು ತೊಂದರೆ ಕೋಡುತ್ತಿರುವ ಬಗ್ಗೆ ಮೌಖಿಕವಾಗಿ ತಿಳಿಸಿದರು ತಹಶೀಲ್ದಾರರು ಯಾವುದೇ ಕ್ರಮ ತೆಗೆದುಕೊಂಡಿಲ್ಲಾ. ಆದ್ದರಿಂದ ಈಗ ಲಿಖಿತ ಮನವಿ ಕೊಟ್ಟಿದ್ದೇವೆ ಎಂದು ಪತ್ರಿಕೆಯೊಂದಿಗೆ ಕೆಲವು ಪಿಡಿಯೋಗಳು ತಮ್ಮ ಅಸಾಯಕತೆ ತೋಡಿಕೊಂಡಿದ್ದಾರೆ.

“ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಸುಮಾರು 41 ಗ್ರಾಮಗಳಲ್ಲಿ ಬೀಕರ ಪ್ರವಾಹ ಸಂಬವಿಸಿದ್ದು, ಇದರಿಂದ ಅಪಾರ ಪ್ರಮಾಣದ ಜನ-ಜಾನುವಾರು ಆಸ್ತಿ ಹಾನಿಯಾಗಿವೆ. ನಮ್ಮ ಆರ್.ಡಿ.ಪಿ.ಆರ್ ಇಲಾಖೆಯ ಎಲ್ಲ ಸಿಬ್ಬಂದಿಗಳು ತಮ್ಮ ಮನೆಗಳು ನೀರಲ್ಲಿ ನಿಂತರೂ ಸರಕಾರಿ ಅಧಿಕಾರಿಯಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಜನರ ಸಂರಕ್ಷಣೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದಾರೆ.ಪ್ರವಾಹದ ನಂತರ ಪಿಡಿಓ ಗ್ರಾಮಲೆಕ್ಕಾಧಿಕಾರಿ ಹಾಗೂ ಇಂಜಿನಿಯರ್‍ಗಳ ಸಮೀಕ್ಷಾ ತಂಡ ರಚನೆ ಮಾಡಲಾಗಿದ್ದು, ಸಮೀಕ್ಷೆ ಪೂರ್ಣಗೊಂಡಿದೆ. ಆದರೆ ಸಾರ್ವಜನಿಕರು ಕೆಲವು ಲೋಪದೋಷಗಳಿಗೆ ಸಂಪೂರ್ಣ ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡುತ್ತಿರುವದು ದುರದುಷ್ಠಕರ. ಸರಕಾರದ ಮಾರ್ಗಸೂಚಿ ಪ್ರಕಾರ “ಥರ್ಡ್ ಪಾರ್ಟಿ ಪರಿಶೀಲನೆ” ಮಾಡಿಸಿ ಸಮೀಕ್ಷೆಯಲ್ಲಿ ಏನಾದರು ಲೋಪದೋಷಗಳಿದ್ದಲ್ಲಿ ಸರಿಪಡಿಸಲಾಗುವದು ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು.”-ಬಸವರಾಜ ಹೆಗ್ಗನಾಯಕ, ಗೋಕಾಕ ತಾಪಂ ಇಒ 


ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು