ಯೋಧ ವೀರು ದೊಡ್ಡವಿರಪ್ಪನವರ ಹುಟ್ಟು ಹಬ್ಬದ ನಿಮಿತ್ತ ಸಸಿಗಳ ವಿತರಣೆ

ಒಟ್ಟು ವೀಕ್ಷಣೆಗಳು : 162
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೈಲಹೊಂಗಲ: ಪ್ರತಿ ವರ್ಷದಂತೆ ಈ ಬಾರಿಯೂ ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ಯೋಧ ವೀರು ದೊಡ್ಡವಿರಪ್ಪನವರ 35ನೇ ಹುಟ್ಟು ಹಬ್ಬವನ್ನು ಈ ಬಾರಿ ಅವರ ಅನುಪಸ್ಥಿತಿಯಲ್ಲಿ ವೀರು ಅಭಿಮಾನಿ ಬಳಗದಿಂದ ಸಸಿ ವಿತರಣೆ ಮೂಲಕ ಹಾಗೂ ಶಾಲಾ ಮಕ್ಕಳಿಗೆ ಸಿಹಿ ಹಂಚುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೀರು ಅಭಿಮಾನಿ ಬಳಗದವರು ಪರಿಸರ ಅಸಮತೋಲನದಿಂದ ಇಂದು ಮನುಷ್ಯ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಹೀಗಾಗಿ ಸಮಸ್ಯೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಹೆಚ್ಚು, ಹೆಚ್ಚು ಸಸಿಗಳನ್ನು ಬೆಳೆಸಬೇಕಿದೆ ಎಂದು ಅಭಿಪ್ರಾಯ ಪಟ್ಟರು. ಯೋದನ ಹುಟ್ಟು ಹಬ್ಬದ ನಿಮಿತ್ತ ಅವರ ಸ್ನೇಹಿತರು ಸಸಿ ವಿತರಿಸುವ ಮೂಲಕ ಪರಿಸರ ಕಾಳಜಿಯನ್ನು ಮೆರೆದಿದ್ದು ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಸಂಗಪ್ಪ ಚಂದನ್ನವರ, ಶಿವಾನಂದ ಕೆಂಚನಗೌಡ್ರ, ಯಲ್ಲನಗೌಡ ಸಂಗನಗೌಡ್ರ, ವಿಕಾಸ ಮಲ್ಲೂರ, ಗುರು ಮಲ್ಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು